Thursday, February 5, 2009

ಗುಮ್ಮನಾಯಕನ ಕೋಟೆ.

ಗುಮ್ಮನಾಯಕನ ಕೋಟೆ.


ಕರ್ನಾಟಕ ಎಳು ಸುತ್ತುಗಳನ್ನು ಹೊಂದಿರುವ ಇನ್ನೊಂದು ಕೋಟೆ "ಗುಮ್ಮನಾಯಕನ ಕೋಟೆ". ಇದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೆಪಲ್ಲಿ ತಾಲ್ಲೂಕಿನ ಗುಮ್ಮನಾಯಕನ ಪಾಳ್ಯ. ಎನ್ನುವ ಗ್ರಾಮದಲ್ಲಿ ಇದೆ. ಇದು ಕೂದ ಚಿತ್ರದುರ್ಗದ ಕೋಟೆಯಂತೆ ಬೆಟ್ಟದಲ್ಲಿದ್ದು ಏಳು ಸುತ್ತುಗಳಿಂದ ಕೂಡಿದೆ. ಈ ಕೋಟೆ ಚಿತ್ರದುರ್ಗದ ಕೋಟೆಗಿಂತ ಸುಮಾರು ನೂರು ವರ್ಷಗಳಷ್ಟು ಹಳೆಯದು (ಕ್ರಿ.ಶ.1350).

ಕ್ರಿ.ಶ.1350 ರಲ್ಲಿ ಗುಮ್ಮನಾಯಕ ಎನ್ನುವ ಪಾಳೆಗಾರ ಈ ಕೋಟೆಯನ್ನು ಕಟ್ಟಿಸಿದರು. ಶತ್ರುಗಳು ದಾಳಿಮಾದಿದಾಗ ಅವರ ದಾಳಿಯನ್ನು ಸಮರ್ಥವಾಗಿ ತಡೆಯುವಷ್ಟು ಬಲಶಾಲಿಯಾಗಿದ್ದು, ಇದರ ಬಾಗಿಲುಗಳು ಶತ್ರುಗಳಿಗೆ ಕಾಣದಂತೆ (ಚಿತ್ರದುರ್ಗದ ಬಾಗಿಲುಗಳ ಮಾದರಿ) ಕೋಟೆಯನ್ನು ವಿನ್ಯಾಸ ಗೊಳಿಸಲಾಗಿದೆ. ಗುಮ್ಮನಾಯಕರೆ ಈ ಪ್ರಾಂಥ್ಯವನ್ನು ಸಮರ್ಥವಾಗಿ ಆಳಿದವರು. ಅವರ ನಂತರ ಈ ಪ್ರಾಂಥ್ಯದಲ್ಲಿ ದಕ್ಷ ನಾಯಕನ ಕೊರತೆಯಿಂದ ಈ ಪಾಳೆಗಾರಿಕೆಯು ನಾಶವಾಯಿತೆಂದು ಇಲ್ಲಿನ ಜನರು ಹೇಳುತ್ತಾರೆ.

ಪ್ರಾಂಥ್ಯದಲ್ಲಿ ಕನ್ನಡ ನಾಡು, ನುಡಿ ಅಭಿವೃದ್ಧಿಯಾಗಿದ್ದು, ಗುಮ್ಮನಾಕರ ಸಾಹಸದ ಕಥೆಗಳನ್ನು ಇಲ್ಲಿನ ಜನರು ಈಗಲು ಹೇಳುತ್ತಾರೆ.
ಈ ಕೋಟೆಯಲ್ಲಿ ಎರಡು ಹಿಂದು ದೇವತೆಗಳ ದೇವಾಲಯಗಳು, ಕೋಟೆಯ ಗೋಡೆಗಳ ಮೇಲೆ ಹಿಂದುತ್ವ ಪರಿಚಯಿಸುವ ಕಲಾತ್ಮಕ ಕೆತ್ತನೆಗಳು, ದೇವರ ವಿಗ್ರಹಗಳು, ನೀರಿನ ಹೊಂಡಗಳು, ಬುರುಜುಗಳು, ಕಾವಲುಗಾರರ ಕಲ್ಲಿನ ಮನೆಗಳು ಮತ್ತು ಭವ್ಯ ಮಹಲುಗಳ ಪಳೆಯುಳಿಕೆಗಳನ್ನು ಕಾಣಬಹುದು.

ಇಂತಹ
ಒಂದು ಅಪರೂಪದ ಐತಿಹಾಸಿಕ ಘಟನೆಗಳನ್ನು ಮತ್ತೆ ನೆನೆಯುವಂತೆ ಮಾಡುವ ಗುರುತುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ಒಂದು ಶೊಚನೀಯ ಸಂಘತಿ. ಸಧ್ಯಕ್ಕೆ ಈಕೋಟೆ ವಿನಾಷದ ಅಂಚಿನಲ್ಲಿದು ಕೋಟೆಯ 3 ಸುತ್ತಿನ ಗೋಡೆಗಳು ನಾಶವಾಗಿದ್ದು ಜೂಜುಕೊರರ ಅಡ್ಡೆಯಾಗಿ ಮಾರ್ಪಟ್ಟಿದ್ದು, ಊರಿನ ಜನರಿಗೆ ಇದು ಕಸದ ತಿಪ್ಪೆಯಾಗಿದೆ,
ಈಗಲಾದರು ನಮ್ಮ ಕರ್ನಾಟಕ ಸರ್ಕಾರ ಎಚ್ಚೆತ್ತು ಇದನ್ನು "ಪ್ರಾಚೀನ ವಸ್ತು ಇಲಾಖೆಗೆ ವಹಿಸಿ ಇದರ ಬಗ್ಗೆ ಹೆಚ್ಚಿನ ಸಂಶೋದನೆಗೆ " ಒತ್ತು ನೀಡದಿದ್ದರೆ ಇಥಿಹಾಸದ ಒಂದು ಭವ್ಯ ಗುರುತು ನಾಶವಾಗುತ್ತದೆ.

ಈ ಕೋಟೆಯ ಇನ್ನು ಹಲವು ಚಿತ್ರಗಳು.

























- ಮಂಜುನಾಥ.ಜಿ
ಬೆಂಗಳೂರು

3 comments:

  1. Namaste
    Thumba sogasagidhe ee sthala....
    Tumba janake gothildantha sthalavidhu....
    Nimma ee pravruthiyanu munduvarisi....
    Shubhavagali....
    Jai Karnataka

    ReplyDelete
  2. bahalla chanagide nammalli intha bellakige barada sthallagalu thumbha ive.e sthallada parichaya maadisidake dhanyavaadagallu.

    ReplyDelete